ರಾಯಚೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿವಿಧ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಕಿಟ್ಸ್ ವಿತರಣೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಮಹಿಳೆಯರಿಗಾಗಿ ಬ್ಯೂಟಿಪಾರ್ಲರ್ ಕಿಟ್ಸ್-150, ಪುರುಷ/ ಮಹಿಳೆಯರಿಗಾಗಿ ಮೊಬೈಲ್ ರಿಪೇರಿ ಕಿಟ್ಸ್-200, ಬಿದಿರು ಬೆತ್ತದ ಉತ್ಪನ್ನಗಳ ತಯಾರಿಕೆ (ಹ್ಯಾಂಡಿ ಕ್ರಾಫ್ಟ್), ಪುರುಷ/ ಮಹಿಳೆಯರಿಗಾಗಿ ದೋಭಿ ಕಿಟ್ಸ್ -150 ಸೇರಿದಂತೆ ಒಟ್ಟು 500 ಕಿಟ್ಸ್ಗಳನ್ನು ವಿತರಿಸಲಾಗುವುದು. ಅರ್ಜಿಯನ್ನು ವೆಬ್ಸೈಟ್ ವಿಳಾಸ: https://raichur.nic.in ನಲ್ಲಿ ಡಿಸೆಂಬರ್ 31 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.