ಹಾಸನ: ಅ.5ರಂದು ಕನ್ನಿಕಪರಮೇಶ್ವರಿ ದೇವಾಲಯದ ಆವರಣದಲ್ಲಿ ಸಾಮೂಹಿಕ ಅಗ್ನಿಹೋತ್ರ: ನಗರದಲ್ಲಿ ಪತಂಜಲಿ ಯೋಗ ಪೀಠದ ರಾಜ್ಯ ಸಂಯೋಜಕ ಹರಿಹರ ಪುರ ಶ್ರೀಧರ್
Hassan, Hassan | Oct 3, 2025 ಹಾಸನ: ನಗರದ ಹಾಸನಾಂಬೆ ದೇವಾಲಯದ ರಸ್ತೆ, ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಸಹಯೋಗ, ವೇದಭಾರತೀ ಹಾಗೂ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಸಮಿತಿ ಸಹಯೋಗದಲ್ಲಿ ಅಕ್ಟೋಬರ್ ೫ರ ಭಾನುವಾರದಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಾಗಾರವನ್ನು ಬೆಳಿಗ್ಗೆ ೯ ಗಂಟೆಗೆ ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಳ್ಳಾಗಿದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಯಜ್ಞ ಪ್ರಭಾರಿ ಮತ್ತು ವೇಧ ಭಾರತಿಯ ರಾಜ್ಯ ಸಂಯೋಜಕ ಹರಿಹರಪುರ ಶ್ರೀಧರ್ ತಿಳಿಸಿದರು.