ಬೆಂಗಳೂರಿನಲ್ಲಿ 7 ಕೋಟಿ 11 ಲಕ್ಷ ರೂಪಾಯಿ ಹಣವನ್ನು ಹೊತ್ತೊಯ್ಯುತ್ತಿದ್ದ ಎಟಿಎಂ ಕ್ಯಾಶ್ ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 5.76 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಭಾರೀ ಬಂದೋಬಸ್ತನೊಂದಿಗೆ ವಶಪಡಿಸಿಕೊಂಡ ಹಣವನ್ನು ಪೊಲೀಸ್ ಕಮಿಷನರ್ ಕಚೇರಿಗೆ ತಂದು ಠೇವಣಿ ಮಾಡಲಾಯಿತು. ದೊಡ್ಡ ಸೂಟ್ಕೇಸ್, ಟ್ರಾವೆಲಿಂಗ್ ಚೀಲಗಳು ಮತ್ತು ಕಪ್ಪು ಬ್ಯಾಗ್ಗಳಲ್ಲಿ ಹಣವನ್ನು ತರಲಾಗಿತ್ತು