ಬೆಳಗಾವಿ: ಮುತ್ಯಾನಟ್ಟಿ ಮತ್ತು ಅಮನ್ ನಗರದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಆಸೀಫ್ ಸೇಠ ಚಾಲನೆ
ಮುತ್ಯಾನಟ್ಟಿ ಮತ್ತು ಅಮನ್ ನಗರದಲ್ಲಿ ಸಿ.ಸಿ. ರಸ್ತೆ ಶಾಸಕ ಆಸೀಫ್ ಸೇಠ ಚಾಲನೆ ನೀಡಿದರು. ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಮುತ್ಯಾನಟ್ಟಿ ಮತ್ತು ಅಮನ್ ನಗರದಲ್ಲಿ ಸಿಸಿ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು. ಬೆಳಗಾವಿ ಉತ್ತರಾದ್ಯಂತ ನಾಗರಿಕ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಮತ್ತು ರಸ್ತೆಗಳ ಗುಣಮಟ್ಟ ಮತ್ತು ಸಾರ್ವಜನಿಕರ ಅನುಕೂಲತೆಯನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆಧ್ಯತೆ ಎಂದು ಹೇಳಿದರು