ಲಿಂಗಸೂರು: ಐದನಾಳ ಗ್ರಾಮದ ಬಳಿಯ ಹಳ್ಳ ತುಂಬಿ ಹರಿಯುತ್ತಿದ್ದು ರಸ್ತೆ ಸಂಚಾರ ಬಂದ್, ಸಾರ್ವಜನಿಕರ ಪರದಾಟ
ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಐದನಾಳ ಗ್ರಾಮದ ಬಳಿಯಲ್ಲಿನ ಹಳ್ಳ ತುಂಬಿ ಹರಿಯುತ್ತಿದ್ದು ಸಾರ್ವಜನಿಕರ ಹೋರಾಟಕ್ಕೆ ತುಂಬಾ ತೊಂದರೆ ಉಂಟಾಗಿದೆ. ಕಳೆದ ಅನೇಕ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬಾರಿ ಪ್ರಮಾಣದಲ್ಲಿ ನೀರು ಹಳ್ಳಕ್ಕೆ ಹರಿದು ಬಂದು ರಸ್ತೆ ಸಂಚಾರ ಬಂದ್ ಆಗಿದೆ. ಸೋಮವಾರ ಬೆಳಗ್ಗೆಯಿಂದ ಲಿಂಗಸುಗೂರ ಪಟ್ಟಣಕ್ಕೆ ಹೋಗಲು ರಸ್ತೆ ಇಲ್ಲದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಶಾಲಾ ಕಾಲೇಜಿಗೆ ಹೋಗಲಾಗದೆ ವಿದ್ಯಾರ್ಥಿಗಳು ಮನೆಯಲ್ಲಿ ಉಳಿದುಕೊಂಡಿದ್ದು ಹಳ್ಳದಾಟಲು ಜೀವ ಭಯದಲ್ಲೆ ಸಾರ್ವಜನಿಕರು ಮುಂದಾಗಿದ್ದಾರೆ.