ಬೆಂಗಳೂರು ಉತ್ತರ: ಬೆಂಗಳೂರಿನಲ್ಲಿ ಗುಂಡಿಗಳಲ್ಲಿ ರಸ್ತೆ ಹುಡುಕುವ ಪರಿಸ್ಥಿತಿ ಬಂದೊದಗಿದೆ: ಬಿ ವೈ ವಿಜಯೇಂದ್ರ
ಜಿಬಿಎ ಮೊದಲ ಸಭೆಯ ಅಜೆಂಡವನ್ನೂ ಶಾಸಕರಿಗೆ ಕೊಡದೆ, ಯಾವುದೇ ಪೂರ್ವ ತಯಾರಿಯಿಲ್ಲದೆ ಡಿಸೆಂಬರ್ ನಲ್ಲಿ ಚುನಾವಣೆ ನಡೆಸಲು ಹೊರಟಿದ್ದಾರೆ, ರಾಜಕೀಯ ಚಟಕ್ಕಾಗಿ ಘೋಷಣೆ ಮಾಡಿಕೊಂಡು ಯಾವುದೇ ಸಿದ್ಧತೆಯಿಲ್ಲದೆ ಹೊರಟಿರುವುದು ನಿಜಕ್ಕೂ ವಿಪರ್ಯಾಸ, ಈಗಾಗಲೇ ಬೆಂಗಳೂರಿನ ಮಹಾಜನತೆ ಈ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಅವರು, ಪ್ರಧಾನಿಗಳ ಮನೆಯ ರಸ್ತೆಯಲ್ಲಿ ಗುಂಡಿಗಳಿವೆ ಎಂಬ ಅಸಡ್ಡೆ ಉತ್ತರ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳಲ್ಲಿ ರಸ್ತೆ ಹುಡುಕುವ ಪರಿಸ್ಥಿತಿ ಬಂದೊದಗಿದೆ, ಈ ಸರ್ಕಾರದಲ್ಲಿ ಎಲ್ಲವೂ ಗೊಂದಲಮಯವಾಗಿದೆ.