ಗೌರಿಬಿದನೂರು: ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಗರದೆಲ್ಲೆಡೆ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿರುವ ನಗರ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೂಜೆ
ಗೌರಿಬಿದನೂರು: ಒಂಬತ್ತು ದಿನಗಳಲ್ಲಿ ಶಕ್ತಿ ಮಾತೆಯನ್ನು ವಿವಿಧ ರೂಪದಲ್ಲಿ ಅಲಂಕರಿಸಿ ಸಂಭ್ರಮಿಸುವುದು ಒಂದು ಕಡೆ ಯಾದರೆ ಈ ರೂಪದಲ್ಲಿ ಎಲ್ಲರೂ ಒಂದಾಗುವ ಪರಂಪರೆಯನ್ನು ನಮ್ಮ ನಾಡಿನ ಹಿರಿಯರು ಜಾರಿಗೊಳಿಸಿದ ದಸರಾ ಹಬ್ಬ ಇಡೀ ನಾಡಿಗೆ ಶಾಂತಿ ಸಂದೇಶವನ್ನು ಸಾರುತ್ತಿದೆ ಎಂದು ದೇವಾಲಯ ಪ್ರದಾನ ಅರ್ಚಕ ಆದರ್ಶಭಟ್ ತಿಳಿಸಿದರು.ಯಾವುದೇ ನಾಡಿಗೆ ಒಂದು ಸಂಸ್ಕೃತಿ ಎನ್ನುವುದು ತಾಯಿ ಬೇರು ಇದ್ದ ಹಾಗೆ. ಕನ್ನಡನಾಡಿಗೆ ದಸರಾ ಎಂಬ ಆಚರಣೆ ಇಲ್ಲಿನ ಪ್ರತಿಯೊಬ್ಬ ಕನ್ನಡಿಗನಿಗೂ ಅಭಿಮಾನಿಸುವ ಆಚರಣೆ ಇದಾಗಿದೆ. ಇದೊಂದು ಶಕ್ತಿ ಪ್ರಧಾನ ಆಚರಣೆ. ಇಲ್ಲಿ ಶಾಂತಿಗಾಗಿ ಆಯುಧವನ್ನು ಪೂಜೆ ಮಾಡುವ ಪರಂಪರೆಯಿದೆ. ಅಂದರೆ ನಾಡಿನ ಹಿತಕ್ಕೆ ಇಂತಹ ಆಚರಣೆಗಳು ಅವಶ್ಯವಾಗಿವೆ ಎಂದು ತಿಳಿಸಿದರು. ಒಂಬತ್ತು ದಿನಗಳು ಅಧಿಶಕ್ತಿ ದೇವತೆಗ