ಸವದತ್ತಿ: ಪಟ್ಟಣದಲ್ಲಿ ಶ್ರೀ ಕುಮಾರೇಶ್ವರ ಮಠದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ
ಪಟ್ಟಣದಲ್ಲಿ ಶ್ರೀ ಕುಮಾರೇಶ್ವರ ಮಠದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಸವದತ್ತಿ ಪಟ್ಟಣದ ಧಾರ್ಮಿಕ ಪರಂಪರೆಯ ಶ್ರೀ ಕುಮಾರೇಶ್ವರ ಮಠದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಶಾಸಕ ವಿಶ್ವಾಸ ವೈದ್ಯ ಅವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು. ಪ್ರಸಿದ್ಧ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾದ ಸವದತ್ತಿ ಪಟ್ಟಣದಲ್ಲಿ, ಶ್ರೇಷ್ಠ ಪರಂಪರೆಯನ್ನು ಹೊಂದಿರುವ ಶ್ರೀ ಕುಮಾರೇಶ್ವರ ಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ವಿಧ್ಯುಕ್ತವಾಗಿ ನೆರವೇರಿಸಲಾಗಿದೆ ಎಂದು ಹೇಳಿದರು