ಮೊಳಕಾಲ್ಮುರು: ನವರಾತ್ರಿಯ ದುರ್ಗಾಷ್ಟಮಿ ಪ್ರಯುಕ್ತ ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ
*ದುರ್ಗಾಷ್ಟಮಿ ಪ್ರಯುಕ್ತ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ* ಚಿತ್ರದುರ್ಗ:-ನವರಾತ್ರಿ ಮೊದಲ ದಿನದಿಂದ ಕೊನೆಯ ದಿನದವರೆಗೂ ದುರ್ಗೆಯ 9 ಅವತಾರಗಳನ್ನು ಸದ್ಭಕ್ತಿಯಿಂದ ಪ್ರತಿದಿನ ಪೂಜಿಸಲಾಗುತ್ತದೆ. ನಿತ್ಯ ದೇವಿಯ ಒಂದೊಂದು ಅವತಾರಗಳಿಗೆ ಶ್ರದ್ಧೆಯಿಂದ ಪೂಜೆ ಸಲ್ಲಿಸಲಾಗುತ್ತದೆ. ನವರಾತ್ರಿಯ ಎಂಟನೇ ದಿನ ಅಥವಾ ದುರ್ಗಾ ಪೂಜೆ ಆಚರಣೆಗಳನ್ನು ದುರ್ಗಾಷ್ಟಮಿ ಅಥವಾ ದುರ್ಗಾ ಅಷ್ಟಮಿ ಮತ್ತು ಮಹಾಷ್ಟಮಿ ಎಂದೂ ಕರೆಯುತ್ತಾರೆ ಮತ್ತು ಹಿಂದೂ ಧರ್ಮದ ಪ್ರಕಾರ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ.