ಬೆಳಗಾವಿ: ನವಂಬರ್ 1 ರಂದು ಕರಾಳ ದಿನಾಚರಣೆ ಬೇಡಾ ನಗರದಲ್ಲಿ ಸಂಸದ ಜಗದೀಶ್ ಶೆಟ್ಟರ್
ಬೆಳಗಾವಿಯಲ್ಲಿ ಪ್ರತಿವರ್ಷ ನವಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತೆ ಆದರೆ ಅದೇ ದಿನ ಎಂಇಎಸ್ ನವರು ಕರಾಳ ದಿನಾಚರಣೆ ಮಾಡುತ್ತಾರೆ ಆದರೆ ಇದರ ಬಗ್ಗೆ ಇಂದು ಶನಿವಾರ 3 ಗಂಟೆಗೆ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ ಬೆಳಗಾವಿಯಲ್ಲಿ ಕನ್ನಡಿಗರು ಮರಾಠಿಗರು ಅನ್ಯೋನ್ಯತೆಯಿಂದ ಬಾಳುತ್ತಿದ್ದು ಕೆಲವರು ವಿಷಬೀಜ ಬಿತ್ತುವ ಕೆಲಸವನ್ನ ಮಾಡುತ್ತಾರೆ ಆದರೆ ಅಂತವರ ಮೇಲೆ ಕ್ರಮ ಆಗಲೇಬೇಕು ಇದರಿಂದ ಮಹಾರಾಷ್ಟ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾರೆ ಆದರೆ ಈ ರೀತಿ ಆಗುವುದು ಬೇಡಾ ಎಲ್ಲರೂ ಕೂಡಿ ಚೆನ್ನಾಗಿ ರಾಜ್ಯೋತ್ಸವ ಆಚರಣೆ ಮಾಡೋಣ ಎಂದು ಸಂಸದ ಜಗದೀಶ ಶೆಟ್ಟರ್ ಕರೆ ನೀಡಿದರು.