ನಾಗಮಂಗಲ: ತಾಲೂಕಿನಲ್ಲಿ ಮಂಜೂರಾಗಿರುವ ಭೂಮಿ ಸಂಬಂಧ ಬಿಜೆಪಿ ಕಾರ್ಯಕರ್ತನಿಂದ ತೊಂದರೆ: ಪಟ್ಟಣದಲ್ಲಿ ಎಂದು ರೈತರ ಆರೋಪ
ನಾಗಮಂಗಲ ತಾಲೂಕಿನಲ್ಲಿ ಮಂಜೂರಾಗಿರುವ ಭೂಮಿ ಸಂಬಂಧ ಬಿಜೆಪಿ ಕಾರ್ಯಕರ್ತರೊಬ್ಬರು ತೊಂದರೆ ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಬುಧವಾರ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೊಂಧೆ ಮಾದಹಳ್ಳಿಯ ನಿವಾಸಿ ನರಸಿಂಹಮೂರ್ತಿ ಬಡಜನರ ಭೂಮಿ ಕಬಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಸರ್ಕಾರದಲ್ಲಿ ದರಕಾಸ್ತು ಕಮಿಟಿ ಸದಸ್ಯರಾಗಿದ್ದ ನರಸಿಂಹಮೂರ್ತಿ ಅವರು, ಪೊಲೀಸ್ ಠಾಣೆ, ನ್ಯಾಯಾಲಯದಲ್ಲಿ ಭೂಮಿ ಸಂಬಂಧ ಸುಳ್ಳು ದೂರು ದಾಖಲಿಸುವುದು. ತಹಶೀಲ್ದಾರ್ ಕಚೇರಿಗೆ ಮೂಗರ್ಜಿ ಹಾಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಕರಡಹಳ್ಳಿ ನಾಗರಾಜು ಅಳಲು ತೋಡಿಕೊಂಡರು.