ಕುರುಗೊಡು: ಭಾರೀ ಮಳೆಯಿಂದ ದಮ್ಮೂರಿನ ಮನೆಯೊಂದರ ಛಾವಣಿ ಕುಸಿತ
ಸೆ.28, ಭಾನುವಾರ ಸಂಜೆ 6 ಗಂಟೆಗೆ ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಚನ್ನವೀರಮ್ಮ ಅವರಿಗೆ ಸೇರಿದ ಕಚ್ಚಾ ಮನೆಯ ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಕಂಪ್ಲಿ ಮಳೆಮಾಪನ ಕೇಂದ್ರದಲ್ಲಿ 3.8 ಸೆಂ.ಮೀ. ಮಳೆಯಾಗಿದೆ ಎಂದು ದಾಖಲಾಗಿದೆ. ಭಾನುವಾರವೂ ಮೋಡ ಮುಸುಕಿದ ವಾತಾವರಣ ಮುಂದುವರಿದು, ಮಲೆನಾಡಿನಂತಹ ಹವಾಮಾನ ಪರಿಸ್ಥಿತಿ ನಿರ್ಮಾಣವಾಗಿದೆ.