ಹನೂರು: ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ದಿನವೆ ರಸ್ತೆಯಲ್ಲಿ ಕುಳಿತ ರೈತರು: ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ನಡೆದ ದೀಪಾವಳಿ ಜಾತ್ರೆ ದಿನದಂದು, ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ11ರವೇಳೆ ಬೆಟ್ಟದ ಪ್ರವೇಶದ್ವಾರದಲ್ಲಿ ರೈತರು ಕುಳಿತು ಧರಣಿ ನಡೆಸಿದರು. ಜಿಲ್ಲಾಧ್ಯಕ್ಷರಾದ ಹೊನ್ನೂರು ಪ್ರಕಾಶ್ ರವರು ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಇಂಡಿಗನತ್ತ ಸೇರಿ ಮಹದೇಶ್ವರಬೆಟ್ಟದ ಸುತ್ತಲ ಕಾಡಂಚಿನ ಗ್ರಾಮಗಳ ರೈತರು ತಮ್ಮ ಹಸುಗಳನ್ನು ಸಮೀಪದ ಕಾಡು ಪ್ರದೇಶದ ಆಸು ಪಾಸು ಗಿಡಮೇವು ಮೇಯಿಸಲು ಪ ಬಿಟ್ಟಾಗ ಅರಣ್ಯ ಇಲಾಖೆ ಅಧಿಕಾರಿಗಳು ಪಟಾಕಿ ಸಿಡಿಸಿ ಹಸುಗಳನ್ನು ಅಟ್ಟುತ್ತಿದ್ದಾರೆ ಎಂದರು