ಇಳಕಲ್: ಮೋದಿ ಜನ್ಮದಿನ: ನಗರದ ಸುರಕ್ಷಾ ಸೇವಾ ಆಶ್ರಮವಾಸಿಗಳಿಗೆ ಹಣ್ಣು ಹಂಪಲ ವಿತರಣೆ
Ilkal, Bagalkot | Sep 17, 2025 ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ತಾಲೂಕು ಬಿಜೆಪಿ ವತಿಯಿಂದ ಇಳಕಲ್ ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಸುರಕ್ಷಾ ಸೇವಾ ಆಶ್ರಮವಾಸಿಗಳಿಗೆ ಹಣ್ಣು ಹಂಪಲಗಳನ್ನು ಬುಧವಾರದಂದು ವಿತರಿಸಲಾಯಿತು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ದೇಶಕ್ಕಾಗಿ ಹಗಲಿರುಳು ದುಡಿಯುವ ಪ್ರಧಾನಿ ದೊರೆತಿರುವುದು ನಮ್ಮ ಸೌಭಾಗ್ಯ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಹಿರಿಮೆ ಎತ್ತರಕ್ಕೇರಿದೆ. ಅವರ ಸೇವೆ ಇನ್ನಷ್ಟು ಕಾಲ ಹೀಗೆ ಇರಬೇಕು ಎಂದರು. ಎಂ.ಆರ್.ಪಾಟೀಲ, ಮಹಾಂತಪ್ಪ ಚನ್ನಿ, ಮಂಜುನಾಥ ಹೊಸಮನಿ, ವೀರೇಶ ಹಿರೇಮನಿ, ಮಲ್ಲು ಕುಂಬಾರ, ಸಾಯಿನಾಥ ತಪ್ಪಲದಡ್ಡಿ, ಹನಮಂತ, ಮುದಿಯಪ್ಪ ಪೂಜಾರಿ, ವೀರೇಶ ಮನ್ನಾಪೂರ, ಆದರ್ಶ ಪಾಟೀಲ, ಸುರಕ್ಷಾ ಸೇವಾ ಆಶ್ರಮದ ಸಂಚಾಲಕ ಪುರುಷೋತ್ತಮ ದರಕ, ಚಾಲಚಂದ್ರ ಇತರರಿದ್ದರು.