ಮಳವಳ್ಳಿ: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಉರುಫ್ ಚೆನ್ನೇಗೌಡ ಇನ್ನಿಲ್ಲ, ಮಂಡ್ಯ ತಾಲ್ಲೂಕು ನೊದೆ ಕೊಪ್ಪಲು ಗ್ರಾಮದಲ್ಲಿ ನಿಧನ
ಮಂಡ್ಯ : ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಉರುಫ್ ಚೆನ್ನೇಗೌಡ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ತಿಥಿ ಸಿನಿಮಾದ ಮೂಲಕ ಗಡ್ಡಪ್ಪ ಅಂತಾನೇ ಜನಪ್ರಿಯರಾಗಿದ್ದ 89 ವರ್ಷದ ಗಡ್ಡಪ್ಪ ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ನಿಧನರಾಗಿದ್ದಾರೆ. ಮೂಲ ಹೆಸರು ಚನ್ನೇಗೌಡ ಆದರೂ ಗಡ್ಡಪ್ಪ ಅಂತಾಲೇ ಜನಪ್ರಿಯರಾಗಿದ್ದ ಇವರು ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ. ತಿಂಗಳ ಹಿಂದೆ ಬಿದ್ದು ಸೊಂಟ ಪೆಟ್ಟಾಗಿ, ಆಪರೇಷನ್ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.