ಬೀಳಗಿ: ಪಟ್ಟಣದಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿದ ಶಾಸಕ ಜೆ.ಟಿ.ಪಾಟೀಲ್
Bilgi, Bagalkot | Sep 30, 2025 ಬೀಳಗಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಅವರು ಗ್ರಂಥಾಲಯ, ಕಂಪ್ಯೂಟರ ಕೊಠಡಿ ಹಾಗೂ ವಿದ್ಯಾರ್ಥಿಗಳು ಕೋಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಂಥಾಲಯ ಸರಿಯಾಗಿ ಬಳಕೆಯಾಗಿರದನ್ನು ಕಂಡು ಇನ್ನು ಮುಂದೆ ಬಳಕೆಯಾಗುವಂತೆ ಕ್ರಮವಹಿಸಬೇಕು. ನಂತರ ಅಡಿಗೆ ಕೋಣೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳನ್ನು ವೀಕ್ಷಿಸಿ ಊಟ ಸವಿದರು. ಆಹಾರ ಧಾನ್ಯವಿರುವ ಕೋಣೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.