ಕಲಬುರಗಿ: ಹಿಂದೂಗಳ ಸಂಖ್ಯೆ ನೋಡಿ ಟಾರ್ಗೆಟ್ ಮಾಡಲಾಗ್ತಿದೆ: ನಗರದಲ್ಲಿ ವಿಎಚ್ಪಿ ಮುಖಂಡ ಲಿಂಗರಾಜಪ್ಪ ಅಪ್ಪಾ ಕಿಡಿ
ಕಲಬುರಗಿ : ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ, ಧರ್ಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದಿತ್ತು ಅಂತಾ ವಿಎಚ್ಪಿ ಮುಖಂಡ ಲಿಂಗರಾಪ್ಪ ಅಪ್ಪಾ ಹೇಳಿದ್ದಾರೆ.. ಅ19 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಶತಮಾನೋತ್ಸವ ಇಡೀ ದೇಶದಲ್ಲಿ ಆಚರಿಸಲಾಗ್ತಿದೆ.. ಹಿಂದೂತ್ವದ ಸಂಖ್ಯೆ ನೋಡಿ ಟಾರ್ಗೆಟ್ ಮಾಡಲಾಗ್ತಿದೆ.. ಧರ್ಮದ ಆಚರಣೆ ಮತ್ತು ಆಯಾ ಧರ್ಮದ ಕಾರ್ಯಕ್ರಮಗಳನ್ನ ಗುರುಗಳೇ ಮಾಡ್ತಾರೆ.. ಆದರೆ ಧರ್ಮದ ವಿಚಾರದಲ್ಲಿ ಸರ್ಕಾರಗಳು ಮಧ್ಯಸ್ಥಿಕೆ ವಹಿಸಬಾರದೆಂದು ಲಿಂಗರಾಜಪ್ಪ ಅಪ್ಪ ಹೇಳಿದ್ದಾರೆ