ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ವಿರೋಧಿಸಿ ಗ್ರಾಮಸ್ಥರು ಮಂಗಳವಾರ ರಾತ್ರಿ 10ಗಂಟೆಗೆ ಪ್ರತಿಭಟನೆ ನಡೆಸಿದರು. ಸಮುದಾಯ ಆರೋಗ್ಯ ಕೇಂದ್ರ ಸಮಸ್ಯೆಗಳ ಆಗರವಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳುವವರಿಲ್ಲ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಮತ್ತು ಮೆಡಿಸಿನ್ ಸಿಗದೇ ರೋಗಿಗಳು ಪರದಾಟ ಸಾಮಾನ್ಯವಾಗಿದೆಆಂಬ್ಯುಲೆನ್ಸ್ ಇಲ್ಲ, ಗರ್ಭಿಣಿ ಸ್ತ್ರೀಯರಿಗೆ ಸರಿಯಾದ ಚಿಕಿತ್ಸೆ ಇಲ್ಲ ಆಸ್ಪತ್ರೆಯಲ್ಲಿ ಸಿಬ್ಬಂದಿ ಪ್ರತಿಯೊಂದಕ್ಕೂ ಲಂಚ ಕೇಳುತ್ತಿದ್ದಾರೆ ಸಮುದಾಯ ಆರೋಗ್ಯ ಕೇಂದ್ರ ವೂ ಸುತ್ತಮುತ್ತಲಿನ 6 ಹಳ್ಳಿಗಳ ಕೇಂದ್ರ ಸ್ಥಾನವಾಗಿದ್ದು, ಇಲ್ಲಿಗೆ ಬಹಳಷ್ಟು ರೋಗಿಗಳು ಚಿಕಿತ್ಸೆ ಅರಸಿ ಬರುತ್ತಾರೆ. ಬಂದ ರೋಗಿಗಳಿಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ