ದೇವದುರ್ಗ: ದೇವದುರ್ಗ ತಾಲೂಕಿನಾದ್ಯಂತ ಮಹಾಮಳೆಗೆ ಒಣಗಿ ನಿಂತ ಹತ್ತಿ ಬೆಳೆ, ಕಂಗಾಲದ ರೈತರು
ಕಳೆದ 5 ದಿನಗಳಿಂದ ನಿರಂತರವಾಗಿ ಸುರಿದ ಮಹಾಮಳೆಯಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಎಲ್ಲ ಗ್ರಾಮಗಳ ರೈತರು ಬೆಳೆದಿದ್ದ ಹತ್ತಿ ಬೆಳೆ ಒಣಗಲಾರಂಭಿಸಿದ್ದು ರೈತರು ಆತಂಕಗೊಂಡಿದ್ದಾರೆ. ಜಮೀನುಗಳೆಲ್ಲ ಮಳೆ ನೀರು ನಿಂತು ಹತ್ತಿ ಗಿಡಗಳು ಹಾಗೆ ಒಣಗಿ ಹೋಗಿವೆ ಸಸಿಗಳು ಕೊಳೆಯುತ್ತಿವೆ ಮತ್ತು ಫಸಲು ಬರುವ ಸಮಯದಲ್ಲಿ ಮಳೆ ಸುರಿದಿದ್ದರಿಂದ ಕಾಯಿಗಳೆಲ್ಲವೂ ಕೂಡ ಒಣಗಿ ಕಪ್ಪಾಗಿವೆ, ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದ್ದು ಸರ್ಕಾರ ಕೂಡಲೇ ನೆರವಿಗೆ ಧಾವಿಸಿ ಪರಿಹಾರ ನೀಡುವಂತೆ ರೈತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.