ಬೆಂಗಳೂರು ಉತ್ತರ: ಒಂದು ಗಂಟೆ ಕೆಟ್ಟು ನಿಂತಿದ್ದ ನಮ್ಮ ಮೆಟ್ರೋ, ಪ್ರಯಾಣಿಕರ ಪರದಾಟ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ಬೆಳಗ್ಗೆ ಸುಮಾರು ಒಂದು ಗಂಟೆ ಕಾಲ ಸಂಚಾರ ವ್ಯತ್ಯಯ ಉಂಟಾಯಿತು.  ಚಲಿಸುತ್ತಿದ್ದ ರೈಲಿನ ಬಾಗಿಲು ತೆರೆದುಕೊಂಡು ಮುಚ್ಚದ ಕಾರಣ, ಪೀಕ್ ಅವರ್ನಲ್ಲಿ ಪ್ರಯಾಣಿಕರು ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ತೊಂದರೆ ಅನುಭವಿಸಿದರು. ಫ್ಲಾಟ್ಫಾರ್ಮ್ಗಳು ಪ್ರಯಾಣಿಕರಿಂದ ತುಂಬಿ ತುಳುಕಿದ್ದವು ಮತ್ತು ಹೊರ ಬರಲು ಹರಸಾಹಸ ಪಡಬೇಕಾಯಿತು.  ಚಲ್ಲಘಟ್ಟದಿಂದ ವೈಟ್ ಫೀಲ್ಡ್ ಕಡೆ ಸಂಚರಿಸುತ್ತಿದ್ದ ರೈಲು ಅರ್ಧ ಮಾರ್ಗದಲ್ಲಿ ನಿಂತುಹೋಗಿತ್ತು, ಬಳಿಕ ಸೇವೆ ಪುನರಾರಂಭಗೊಂಡಿತು.