ಶಿರಸಿ: ಹೊಸ ಆಟೋ ಪರವಾನಿಗೆ ತಾತ್ಕಾಲಿಕ ತಡೆ ಹಿಡಿಯಲು ಆಗ್ರಹಿಸಿ ಆಟೋ ಚಾಲಕ, ಮಾಲಕರ ಸಂಘದಿಂದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮನವಿ
ಶಿರಸಿ: ಆಟೋ ಪರವಾನಿಗೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಆಗ್ರಹಿಸಿ, ಶಿರಸಿ ನಗರ ಆಟೋ ಚಾಲಕರ ಮತ್ತು ಮಾಲಕರ ಸಂಘದ ನೇತೃತ್ವದಲ್ಲಿ ಸಹಾಯಕ ಆಯುಕ್ತರಿಗೆ ಹಾಗೂ ಡಿ.ವೈ.ಎಸ್.ಪಿಗೆ ಅವರಿಗೆ ಮನವಿ ಸಲ್ಲಿಸಲಾಯಿತು. ಶಿರಸಿ ನಗರದಲ್ಲಿ ಈಗಾಗಲೇ ಸಂಘದಲ್ಲಿ ಸೇರ್ಪಡೆಗೊಂಡ ಸಾವಿರಕ್ಕೂ ಅಧಿಕ ಆಟೋಗಳಿದ್ದು, ಸರಿಯಾಗಿ ನಿಲ್ಲಲು ಸ್ಥಳಾವಕಾಶವಿಲ್ಲ. ಆದರೂ ರಸ್ತೆ, ಅಂಗಡಿಗಳ ಬಾಗಿಲಲ್ಲಿ ನಿಲ್ಲಿಸಿಕೊಂಡು ದಿನದ ಬಾಡಿಗೆ ಮೂಲಕ ಇನ್ಸುರೆನ್ಸ್, ಪಾಸಿಂಗ್, ಮನೆ ನಿರ್ವಹಣೆ, ಔಷಧೋಪಚಾರಗಳ ಬಳಕೆ, ಮಕ್ಕಳ ವಿದ್ಯಾಭ್ಯಾಸ ಮಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದೇವೆ ಎಂದರು.