ರಾಮದುರ್ಗ: ಹಿಂದು ಸಮಾಜ ಒಡೆಯುವ ಸಾಹಸ ಸರಕಾರ ಮಾಡ್ತಿದೆ: ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ
ಹಿಂದು ಸಮಾಜ ಒಡೆಯುವ ಸಾಹಸ ಸರಕಾರ ಮಾಡ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. 2017-18ರಲ್ಲೂ ಇದೇ ಕೆಲಸ ಮಾಡಿದ್ದ ಸಿದ್ದರಾಮಯ್ಯ, ಈಗ ಜಾತಿ ಗಣತಿಯ ಹೆಸರಿನಲ್ಲಿ ಹಿಂದು ಸಮಾಜವನ್ನು ಒಡೆದು ಸೋನಿಯಾ ಗಾಂಧಿಗೆ ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಸೋಮವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಹಿಂದು ಸಮಾಜವನ್ನು ಒಡೆಯುವ ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು