ಶ್ರೀರಂಗಪಟ್ಟಣ: ಮಳೆಯಿಂದ ಒಡೆದ ದರಸಗುಪ್ಪೆ ಸಿ ಡಿ ಎಸ್ ನಾಲೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಭೇಟಿ ಹಾಗೂ ಪರಿಶೀಲನೆ
ತಾಲೂಕಿನ ದರಸಗುಪ್ಪೆಯ ಸಿ.ಡಿ.ಎಸ್ ನಾಲೆ ಒಡೆದು ರೈತರ ಬೆಳೆ ಹಾನಿಯಾಗಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ನಡೆಸಿ ಮಾತನಾಡಿದ ಅವರು ಭಾರಿ ಮಳೆ ಉಂಟಾಗಿರುವುದರಿಂದ ಸಿ.ಡಿ.ಎಸ್ ನಾಲೆ ಒಡೆದು ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ, ಮಳೆ ನಿಂತ ನಂತರ ಜಂಟಿ ಸರ್ವೆ ಕಾರ್ಯಾಚರಣೆ ನಡೆಸಿ ಯಾರ ಬೆಳೆ ಎಷ್ಟು ಹಾನಿಯಾಗಿದೆ ಎಂದು ತಿಳಿದುಕೊಂಡು ಅಂದೇ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಸರ್ವೇ ನಂತರವೇ ಎಷ್ಟು ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಿಳಿಯುತ್ತದೆ ಎಂದರು. ಸಿ.ಡಿ.ಎಸ್ ನಾಲೆ ನೀರನ್ನು ನಿಲ್ಲಿಸಲಾಗಿದೆ, ಮಳೆ ನಿಂತ ನಂತರ ಒಡೆದ ನಾಲೆಯನ್ನು ಸರಿಪಡಿಸಲಾಗುವುದು ಎಂದರು.