ಸೂಪಾ: ಜೋಯಿಡಾ ತಾ.ಪಂ ಸಭಾ ಭವನದಲ್ಲಿ 2024-25 ನೇ ಸಾಲಿನ ಜಮಾ ಬಂಧಿ ಕಾರ್ಯಕ್ರಮ
ಜೋಯಿಡಾ : ಜೋಯಿಡಾ ತಾ.ಪಂಚಾಯತಿಯ 2024-25 ನೇ ಸಾಲಿನ ಜಮಾ ಬಂಧಿ ಕಾರ್ಯಕ್ರಮವು ಜೋಯಿಡಾ ತಾ.ಪಂ ಸಭಾ ಭವನದಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ಉ.ಕ ಜಿ.ಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ ಅಧ್ಯಕ್ಷತೆಯಲ್ಲಿ ಜಮಾ ಬಂಧಿ ಕಾರ್ಯಕ್ರಮ ಜರುಗಿತು. ಸಭೆಯಲ್ಲಿ 2024-25 ನೇ ಸಾಲಿನಲ್ಲಿ ಸರಕಾರದಿಂದ ಬಿಡುಗಡೆಯಾದ ಅನುದಾನದ ಜಮಾ ಖರ್ಚುಗಳನ್ನು ಓದಿ ಹೆಳಲಾಯಿತು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಹಾಗೂ ಬಳಕೆ ಬಗ್ಗೆ ವಿವರವನ್ನು ಓದಿ ಹೆಳಲಾಯಿತು.