ಬೆಳಗಾವಿ: ರಾಜಕೀಯದಲ್ಲಿ ಟಾರ್ಗೆಟ್ ಮಾಡೋರು ಇರಬೇಕು: ನಗರದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ
ರಾಜಕೀಯದಲ್ಲಿ ಟಾರ್ಗೆಟ್ ಮಾಡೋರು ಇರಬೇಕು ಎಂದು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು. ರಾಜಕಾರಣದಲ್ಲಿ ಟಾರ್ಗೆಟ್ ಮಾಡುವುದು ಸಹಜ. ಜಾರಕಿಹೊಳಿ ಅವರೊಂದಿಗೆ ಸಂಬಂಧ ಕೆಡಿಸಲು ಕೆಲವರು ಪ್ರಯತ್ನಿಸಿದ್ದಾರೆ. ನಮಗೂ ರಾಜಕಾರಣ ಗೊತ್ತಿದ್ದು, ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಭಾನುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ನಿಪ್ಪಾಣಿ ಸಹಕಾರ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ 75 ಜನ ಸ್ವತಃ ಬಂದು ಮತದಾನ ಮಾಡಿದ್ದಾರೆ ಮತ್ತು ಗೆಲುವು ನಿಶ್ಚಿತವಾಗಿದ್ದು, ಮತ ಎಣಿಕೆ ನಂತರ ಫಲಿತಾಂಶ ತಿಳಿಯಲಿದೆ ಎಂದು ಹೇಳಿದರು