ದಾಂಡೇಲಿ : ದಾಂಡೇಲಿಯ ರೋಟರಿ ಕ್ಲಬ್ ಸಮಾಜಮುಖಿಯಾಗಿ ಮಾಡುತ್ತಿರುವ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಊರಿನ ಪ್ರಗತಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ದಾಂಡೇಲಿಯ ರೋಟರಿ ಕ್ಲಬ್ ಸಮುದಾಯ ಸೇವೆ ಮತ್ತು ಸಾರ್ವಜನಿಕ ಅನುಕೂಲಕ್ಕಾಗಿ ತನ್ನ ನಿರಂತರವಾಗಿ ಬದ್ಧತೆಯಿಂದ ಕಾದಿನಿರ್ವಹಿಸುತ್ತಾ ಬಂದಿದೆ ಎಂದು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ನುಡಿದರು. ಅವರು ನಗರದ ಜೆ.ಎನ್.ರಸ್ತೆಯಲ್ಲಿ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ಬಸ್ ಶೆಲ್ಟರನ್ನು ಮಂಗಳವಾರ ಸಂಜೆ 7:00 ಗಂಟೆ ಸುಮಾರಿಗೆ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.