ಕಲಬುರಗಿ: ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ, ಗೃಹ ಸಚಿವರ ವೈಫಲ್ಯ: ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿ
ಕಲಬುರಗಿ : ವಿಜಯಪುರ ಜಿಲ್ಲೆಯ ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆ17 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಗೃಹ ಸಚಿವರು ತಮ್ಮ ಖಾತೆಯನ್ನ ಸರಿಯಾಗಿ ನಿರ್ವಹಣೆ ಮಾಡ್ತಿಲ್ಲವೆಂದು ಆರೋಪಿಸಿದರು.. ಕಳೆದ ವರ್ಷ ಬೀದರನಲ್ಲಿ ಸಹ ಎಸ್ಬಿಐ ದರೋಡೆ ನಡೆದಿತ್ತು.. ಇಂದಿಗೂ ಆರೋಪಿಗಳನ್ನ ಬಂಧಿಸಿಲ್ಲವೆಂದು ವಿಜಯೇಂದ್ರ ಕಿಡಿಕಾರಿದ್ದಾರೆ.