ಗುಡಿಬಂಡೆ: ಆರೋಗ್ಯ ಸಮಸ್ಯೆ ಜೀವನದಲ್ಲಿ ಜಿಗುಪ್ಸೆ : ಮಹಿಳೆ ನೇಣಿಗೆ ಶರಣು ನುಲಿಗುಂಬ ಗ್ರಾಮದಲ್ಲಿ ಘಟನೆ
ಗುಡಿಬಂಡೆ: ಆರೋಗ್ಯ ಸಮಸ್ಯೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗುಡಿಬಂಡೆ ತಾಲ್ಲೂಕಿನ ನುಲಿಗುಂಬ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀನರಸಮ್ಮ(48) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ತಾಲ್ಲೂಕಿನ ನುಲಿಗುಂಬ ಗ್ರಾಮದ ಲಕ್ಷ್ಮೀನರಸಮ್ಮ ಗಂಡ ಮೃತಪಟ್ಟ ನಂತರ ಬೆಂಗಳೂರು ವೈಟ್ ಫೀಲ್ಡ್ ನಲ್ಲಿ ಇರುವ ತನ್ನ ಏಕೈಕ ಮಗಳಾದ ನಾಗಮಣಿ ಮನೆಯಲ್ಲಿ ವಾಸವಾಗಿದ್ದರು.ಲಕ್ಷ್ಮೀ ನರಸಮ್ಮಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಮಗಳು ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಇದರ ಜೊತೆಗೆ ಪಿಟ್ಸ್ ಸಹ ಬರುತ್ತಿತ್ತು ಎನ್ನಲಾಗಿದೆ.ನನಿಂದ ಅಳಿಯ ಮತ್ತು ಮಗಳಿಗೆ ತೊಂದರೆ ಆಗುತ್ತದೆ ಎಂದು ಮನ ನೊಂದು ಸೆಪ್ಟೆಂಬರ್ 22 ರಂದು ಬೆಂಗಳೂರಿನಿಂದ ನಿಲುಗುಂಬ ಗ್ರಾಮಕ್ಕೆ ಸಂಬಂಧಿಕರ ತಿಥಿ ಇದೆ ಎಂದು ಮಗಳ