ಬಂಗಾರಪೇಟೆ: ಬೇತಮಂಗಲ ಪಾಲಾರ್ ನದಿಗೆ ಬಾರಿ ಪ್ರಮಾಣದಲ್ಲಿ ನೀರು ಬರುವುದನ್ನು ವೀಕ್ಷಣೆ ಮಾಡಿದ ಶಾಸಕಿ ರುಪಕಲಾ ಶಶಿಧರ್
ಇತ್ತೀಚೆಗಷ್ಟೇ ನೂತನವಾಗಿ ನಿರ್ಮಿಸಿ ಲೋಕೋಪಯೋಗಿ ಇಲಾಖೆ ಸಚಿವರಿಂದ ಲೋಕಾರ್ಪಣೆ ಗೊಂಡಿರುವ 10 ಕೋಟಿ ವೆಚ್ಚದ ಸೇತುವೆಗಳ ಮೂಲಕ ಬೇತಮಂಗಲ ಪಾಲಾರ್ ನದಿಗೆ ಹರಿದು ಬರುತ್ತಿರುವ ಬಾರಿ ಪ್ರಮಾಣದ ನೀರನ್ನು ಶಾಸಕಿ ರೂಪಕಲಾ ಶಶಿಧರ್ ಶುಕ್ರವಾರ ಭೇಟಿ ನೀಡಿ ವೀಕ್ಷಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.ಗ್ರಾಮದ ಸಮೀಪದ ನಲ್ಲೂರು ಹಾಗೂ ನತ್ತ ಗ್ರಾಮಗಳ ಮಾರ್ಗ ಮಧ್ಯೆ ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೂಲಕ ಬೇತಮಂಗಲ ಪಾಲಾರ್ ನದಿಗೆ ಕೋಲಾರ ನಂದಿ ಬೆಟ್ಟದಿಂದ ನೀರು ಬರುವುದನ್ನು ಕಾಣಬಹುದು.ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಸುಮಾರು 4-5 ಕೆರೆಗಳು ತುಂಬಿ ಕೋಡಿ ನೀರು ಪಾಲಾರ್ ನದಿಗೆ ಬರುತ್ತಿದೆ,