ಮುಳಬಾಗಿಲು: ಯಳಚೇಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಲಕಿಯರ ಕುಟುಂಬಕ್ಕೆ ಸಾಂತ್ವಾನ ಹೇಳಿದ
ಶಾಸಕ ಸಮೃದ್ದಿ ಮಂಜುನಾಥ್
ಬಾಲಕಿಯರಿಬ್ಬರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯಲ್ಲ ಅದೊಂದು ಆತ್ಮಹತ್ಯೆ ಅನ್ನೋ ತೀರ್ಮಾನಕ್ಕೆ ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂದಿದ್ದು, ಈ ಮಧ್ಯೆ ಯಳಚೇಪಲ್ಲಿ ಗ್ರಾಮಕ್ಕೆ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಬುಧವಾರ ಭೇಟಿ ನೀಡಿ ಮೃತ ಬಾಲಕಿಯರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ರು. ಈ ವೇಳೆ ಶಾಸಕ ಮಂಜುನಾಥ್ ಎದುರು ಬಾಲಕಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ರು. ಬಾಲಕಿಯ ಸಾವು ಆತ್ಮಹತ್ಯೆ ಅಲ್ಲ ಸಾವಿನ ಬಗ್ಗೆ ತನಿಖೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹ ಮಾಡಿದ್ರು. ಬಾಲಕಿಯರ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ ಬಾಲಕಿಯರ ಶವಗಳ ಮೇಲೆ ಗಾಯಗಳಾಗಿತ್ತು ಎಂದು ಅನುಮಾನವಿದೆ ಎಂದ್ರು