ಪೊಲೀಸ್ ಠಾಣೆ ಬಗ್ಗೆ ಭಯ ಬೇಡ ವಿದ್ಯಾರ್ಥಿಗಳು ಸಾರ್ವಜನಿಕರು ಭಯವನ್ನ ತೊರೆದು ಯಾವುದೇ ರೀತಿಯ ತೊಂದರೆಯಿದ್ದಲ್ಲಿ ಮುಕ್ತವಾಗಿ ಹೇಳಿಕೊಂಡು ಸಮಸ್ಯೆಯನ್ನ ಬಗೆಹರಿಸಿಕೊಳ್ಳಬೇಕು ಎಂದು ಹುಮ್ನಾಬಾದ್ ಪೊಲೀಸ್ ಠಾಣೆ ಎಚ್. ಸಿ ಸಂತೋಷ್ ಕುಮಾರ್ ಅವರು ಸಲಹೆ ನೀಡಿದರು. ನಗರದ ಪೊಲೀಸ್ ಠಾಣೆಗೆ ಬುಧವಾರ ಸಂಜೆ 4ಕ್ಕೆ ನಗರದ ವಿಬಿ ಹೋಮಿಯೋಪತಿ ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಂದರ್ಶನಕ್ಕಾಗಿ ಬಂದಾಗ ಅವರು ಮಾರ್ಗದರ್ಶನ ನೀಡಿದರು.