ಕಮಲನಗರ: ಅ.28ರಂದು ಕಮಲನಗರ್ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ: ಪಟ್ಟಣದಲ್ಲಿ ಶಾಸಕ ಪ್ರಭು ಚೌಹಾಣ
ಅಕ್ಟೋಬರ್ 28ರಂದು ಕಮಲ್ನಗರ್ ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಶಾಸಕ ಪ್ರಭು ಚೌಹಾಣ್ ಅವರು ತಿಳಿಸಿದರು. ಪ್ರಜಾಸೌಧ ಕಟ್ಟಡ ನಿಗದಿಪಡಿಸಿದ ಸ್ಥಳಕ್ಕೆ ಭಾನುವಾರ ಮಧ್ಯಾನ ಮೂರು ಮೂವತ್ತಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ ಕೊಡು ಗೈ ದಾನಿಯೊಬ್ಬರು 2.5ಎಕರೆ ಜಮೀನು ದಾನವಾಗಿ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಯವರಿಗೆ 15 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆ ಪೈಕಿ ₹ 8.5 ಕೋಟಿ ಅನುದಾನದ ಮಂಜೂರಾತಿ ದೊರೆತಿದೆ. ಭೂಮಿಪೂಜೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆ ಆಗಮಿಸುತ್ತಿದ್ದಾರೆ ಎಂದು ವಿವರಿಸಿದರು.