ಕಲಬುರಗಿ: ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ದಿಢೀರ್ ಭೇಟಿ
ಕಲಬುರಗಿ : ಕಲಬುರಗಿ ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ನವೆಂಬರ್ 11 ರಂದು ಮಧ್ಯಾನ 3 ಗಂಟೆಗೆ ಆಸ್ಪತ್ರೆಯ ನಿರ್ದೇಶಕರಾದ ಡಾ ಬಿ ದಿನೇಶ್ ಅವರೊಂದಿಗೆ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿದ್ದಾರೆ.. ಇನ್ನೂ ಆಸ್ಪತ್ರೆಯ ಹೊರರೋಗಿಗಳ ವಾರ್ಡ್ ಸೇರಿದಂತೆ ವಿವಿಧ ವಿಭಾಗಗಳಿಗೆ ಸಚಿವ ಪಾಟೀಲ್ ಭೇಟಿ ನೀಡಿ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿದೆಯಾ ಅನ್ನೊದರ ಬಗ್ಗೆ ಮಾಹಿತಿ ಪಡೆದು ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ