ಹಾವೇರಿ: ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ದುರ್ಗಾದೌಡ್ ಪಥಸಂಚಲನ ಕಾರ್ಯಕ್ರಮ; ನೂರಾರು ಹಿಂದೂ ಕಾರ್ಯಕರ್ತರು ಭಾಗಿ
Haveri, Haveri | Oct 5, 2025 ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ನಗರದಲ್ಲಿ ಭಾನುವಾರ ದುರ್ಗಾ ದೌಡ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ನಗರದ ದ್ಯಾಮವ್ವದೇವಿ ದೇವಸ್ಥಾನ ಆವರಣದಲ್ಲಿ ದುರ್ಗಾ ದೌಡ ಪಥ ಸಂಚಲನಕ್ಕೆ ಹರಸೂರು ಬಣ್ಣದಮಠದ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಪ್ರಾರಂಭಗೊಂಡ ಪಥಸಂಚಲನವು ಸುಭಾಷ ವೃತ್ತ, ಡಾ.ಬಿ.ಆರ್ ಅಂಬೇಡ್ಕರ ವೃತ್ತ, ಮೇಲಿನ ಪೇಟೆ, ದ್ಯಾಮವ್ವನಗುಡಿ ಪಾದಗಟ್ಟಿ ಎಂ.ಜಿ ರೋಡ, ಮಹಾತ್ಮಾ ಗಾಂಧಿ ವೃತ್ತದ ಮುಖಾಂತರ ಸಾಗಿ ರಾಮದೇವರ ಮಂದಿರದಲ್ಲಿ ತಲುಪಿ ಸಮಾರೋಪಗೊಂಡಿತು. ಬಳಿಕ ರಾಮದೇವರ ಗುಡಿಯಲ್ಲಿ ಶಸ್ತ್ರಪೂಜೆ ನಡೆಯಿತು.