ಕಂಪ್ಲಿ: ಹಬ್ಬದ ಖರೀದಿ ಭರಾಟೆ: ಮೇನ್ ಬಜಾರ್ನಲ್ಲಿ ಜನಜಂಗುಳಿ
Kampli, Ballari | Oct 20, 2025 ಕಂಪ್ಲಿ: ದೀಪಾವಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ನಗರದ ಮೇನ್ ಬಜಾರ್ ಹಾಗೂ ಅಂಬೇಡ್ಕರ್ ಸರ್ಕಲ್ ಪ್ರದೇಶದಲ್ಲಿ ಅಕ್ಟೋಬರ್ 20, ಸೋಮವಾರ ಸಂಜೆ 6 ಗಂಟೆ ವೇಳೆಗೆ ಜನಜಾತ್ರೆ ಕಂಡುಬಂತು. ಜನರು ಹೂ, ಹಣ್ಣು, ತರಕಾರಿ, ಬಾಳೆದಿಂಡು, ಕಾಯಿ, ಕರ್ಪೂರ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಾ ಹಬ್ಬದ ಸಿದ್ದತೆಯಲ್ಲಿ ತೊಡಗಿದ್ದರು. ಹಬ್ಬದ ಬೇಡಿಕೆಯ ಹಿನ್ನೆಲೆಯಲ್ಲಿ ಹೂ ಬೆಳೆಗಾರರು ಕೂಡ ತಮ್ಮ ಬೆಳೆಗಳನ್ನು ಖುದ್ದು ಮಾರುಕಟ್ಟೆಗೆ ತಂದಿದ್ದು, ವಿವಿಧ ಬಗೆಯ ಹೂಗಳನ್ನು ಮಾರಾಟ ಮಾಡಿದರು.