ಜಗಳೂರು: ಜಗಳೂರು ಪಟ್ಟಣದ ನೈರ್ಮಲ್ಯಕ್ಕೆ ಪ್ರತಿಯೊಬ್ಬ ನಾಗರೀಕನು ಕೈಜೋಡಿಸಬೇಕು: ಪಟ್ಟಣದಲ್ಲಿ ಶಾಸಕ ದೇವೇಂದ್ರಪ್ಪ
ಜಗಳೂರು ಪಟ್ಟಣದ ನೈರ್ಮಲ್ಯಕ್ಕೆ ಪ್ರತಿಯೊಬ್ಬ ನಾಗರೀಕನು ಕೈಜೋಡಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಬುಧವಾರ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಶಾಸಕರ ಜನಸಂಪರ್ಕದ ಬಳಿ ಬುಧವಾರ ಸಂಜೆ 5 ಗಂಟೆಗೆ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹಿಸೇವೆ-2025 ರಡಿ ಸ್ವಚ್ಛತೋತ್ಸವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣವನ್ನೊಳಗೊಂಡAತೆ ಗ್ರಾಮೀಣ ಭಾಗದಲ್ಲಿ ಕಸದ ರಾಶಿಯನ್ನು ಸಾರ್ವಜನಿಕ ಸ್ಥಳ ಮತ್ತು ಜನವಸತಿ ಪ್ರದೇಶಗಳಲ್ಲಿ ಸಂಗ್ರಹ ಮಾಡುವುದರಿಂದ ರೋಗ ಹರಡುತ್ತವೆ. ಮಹಿಳೆಯರು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಕಸದ ವಾಹನಗಳಲ್ಲಿ ಸಂಗ್ರಹಿಸಿ ಕಸವನ್ನು ವಿಲೆವಾರಿ ಮಾಡಬೇಕು ಎಂದು ಹೇಳಿದರು.