ರಾಯಚೂರು: ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ನವಜಾತ ಶಿಶುಗಳನ್ನ ಬಿಸಾಡುವವರೇ ಎಚ್ಚರ: ಈ ಬಗ್ಗೆ ಜಿಲ್ಲಾಧಿಕಾರಿ ಹೇಳುವುದೇನು
ಯಾವುದೇ ಸಾರ್ವಜನಿಕರು ತಮಗೆ ಜನಿಸಿದ ನವಜಾತ ಶಿಶು ಬೇಡವಾದಲ್ಲಿ ಅಂತಹ ಮಕ್ಕಳನ್ನು ಮಕ್ಕಳ ಸಹಾಯವಾಣಿ ಸಂಖ್ಯೆ:1098 ಗೆ ಕರೆ ಮಾಡಿ ಮಾಹಿತಿ ನೀಡಿ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ರಾಯಚೂರ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರೆ. ವಾರದಲ್ಲಿ ಎರಡು ನವಜಾತ ಶಿಶುಗಳನ್ನು ಅಪರಿಚಿತ ವ್ಯಕ್ತಿಗಳು ಹಳ್ಳದ ದಂಡೆಯಲ್ಲಿ ಮತ್ತು ಕ್ಯಾನಲ್ ಪಕ್ಕದಲ್ಲಿ ಎಸೆದು ಹೋಗಿದ್ದು, ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದ ಮೇಲೆ ಎರಡು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಇದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ತಮಗೆ ಜನಿಸಿದ ನವಜಾತ ಶಿಶುಗಳು ತಮಗೆ ಬೇಡವಾದಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಕಸದ ಬುಟ್ಟಿಯಲ್ಲಿ, ರಸ್ತೆ ಬದಿಯಲ್ಲಿ, ತಿಪ್ಪೆ ಗುಂಡಿಯಲ್ಲಿ ಹಾಕು