ಇಳಕಲ್: ೨೧ ದಿನದ ಇಳಕಲ್ ಕಾ ಮಹಾರಾಜ್ ಗಣೇಶ ವಿಸರ್ಜನಾ ಮೆರವಣಿಗೆ ಪೋಲಿಸ್ ಬಿಗಿ ಬಂದೋ ಬಸ್ತ : ಸ್ಥಳಕ್ಕೆ ಎಸ್ಪಿ ಭೇಟಿ
Ilkal, Bagalkot | Sep 16, 2025 ಬಾಗಲಕೋಟ ಜಿಲ್ಲೆಯ ಇಳಕಲ್ದ ಹೊಸಪೇಟೆ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿರುವ ಆಂಜನೇಯ ಗ್ರಾಮೀಣಾಭಿವೃದ್ಧಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ೨೧ ದಿನಗಳ ಕಾಲ ಪ್ರತಿಷ್ಠಾಪಿಸಿದ ಇಳಕಲ್ ಕಾ ಮಹಾರಾಜ ಗಣೇಶನ ವಿಸರ್ಜನಾ ಮೆರವಣಿಗೆ ಸೆ.೧೬ ರಂದು ನಡೆಯಲಿದ್ದು ಈ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳ ನಡೆಯದಂತೆ ಪೋಲಿಸ್ ಬಿಗಿ ಬಂದೋ ಬಸ್ತ ವ್ಯವಸ್ಥೆಯನ್ನು ಡಿವಾಯ್ಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲ ಸವದಿ, ಪಿಎಸ್ಐ ಮಂಜುನಾಥ ಪಾಟೀಲ, ಮಲ್ಲಿಕಾರ್ಜುನ ಸತ್ತಿಗೌಡರ ವ್ಯವಸ್ಥೆ ಮಾಡಿದ್ದಾರೆ. ಸೆ.೧೬ ಸಾಯಂಕಾಲ ೪ ಗಂಟೆಗೆ ಬಾಗಲಕೋಟ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿಪೋಲಿಸ್ ಬಿಗಿ ಬಂದೋ ಬಸ್ತನ್ನು ಪರಿಶೀಲನೆಯನ್ನು ನಡೆಸಿದರು.