ದಾಂಡೇಲಿ : ಕೂಡು ಕಟ್ಟು ಕರಾವಳಿ ಜಿಲ್ಲೆಗಳ ಬಹಳ ದೊಡ್ಡ ಸಂಕೇತ ಮತ್ತು ಹೆಜ್ಜೆ. ಬಹು ಜನಾಂಗಗಳು ಕೂಡಿ ಕಟ್ಟುವ ಸಾಂಸ್ಥಿಕ ಅಸ್ಮಿತೆಯನ್ನು ಹೊಂದಿರುವ ವಿಶಿಷ್ಟ ಜಿಲ್ಲೆ ನಮ್ಮ ಉತ್ತರ ಕನ್ನಡ ಜಿಲ್ಲೆ. ನೂರಾರು ಬಹುತ್ವಗಳಿಗೆ ಸಾಕ್ಷಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ನಾವು ಇಲ್ಲಿಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣ ಸೋತಿದ್ದೇವೆ ಎಂದು ಲೇಖಕಿ ಹಾಗೂ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ವಿನಯಾ ಒಕ್ಕುಂದ ಅವರು ನುಡಿದರು. ಅವರು ನಗರದ ಹಳೆ ನಗರ ಸಭೆಯ ಮೈದಾನದಲ್ಲಿ ನಡೆಯದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ಬೆಳಿಗ್ಗೆ 10:30 ಗಂಟೆ ಸಗೆ ನಡೆದ ನನ್ನ ಉತ್ತರ ಕನ್ನಡ ; ಕಾಲು ಶತಮಾನದ ನಡಿಗೆ ಎಂಬ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.