ಬೆಂಗಳೂರು ದಕ್ಷಿಣ: ನಗರದಲ್ಲಿ ಓಲಾ ಎಲೆಕ್ಟ್ರಿಕಲ್ ಕಂಪನಿ ಮಾಲೀಕರ ಹೆಸರು ಬರೆದು ಆತ್ಮಹತ್ಯೆ ಶರಣಾದ ಉದ್ಯೋಗಿ..!
ಕೋರಮಂಗಲದಲ್ಲಿರುವ ಓಲಾ ಕಂಪನಿ ಮಾಲೀಕರು ಹಾಗೂ ಸಹೋದ್ಯೋಗಿಗಳ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿಟ್ಟು ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೆ. ಅರವಿಂದ್ (38) ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ. ಚಿಕ್ಕಲ್ಲಸಂದ್ರದ ಮಂಜುನಾಥ ನಗರದಲ್ಲಿರುವ ಮನೆಯೊಂದರಲ್ಲಿ ಕಳೆದ ಸೆ. 29ರಂದು ವಿಷ ಸೇವಿಸಿದ್ದರು. ವಿಷಯ ತಿಳಿದು ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಮೃತಪಟ್ಟಿದ್ದರು.