ಶಿಕಾರಿಪುರ: ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಏನು ಹೇಳುತ್ತಾರೆ ಅನ್ನೋದು ಪರಿಣಾಮ ಬೀರಲ್ಲ: ಶಿರಾಳಕೊಪ್ಪದಲ್ಲಿ ಬಿ.ವೈ.ವಿಜಯೇಂದ್ರ
ಆರ್ ಎಸ್ ಎಸ್ ಬ್ಯಾನ್ ವಿಚಾರ ಕುರಿತಂತೆ ಮರ್ಲಿಕಾರ್ಜುನ ಖರ್ಗೆ ಹೇಳಿಕೆ ಕುರಿತಂತೆ ಅಪ್ಪನ ಪ್ರಭಾವ ಮಕ್ಕಳ ಮೇಲೆ ಆಗುವುದು ಸಹಜ.ಆದರೆ ಈ ವಿಚಾರದಲ್ಲಿ ಬದಲಾಗಿದೆ. ಮಕ್ಕಳ ಪ್ರಭಾವ ತಂದೆಯ ಮೇಲೆ ಆಗಿದೆ ಎಂದು ಶನಿವಾರ ಶಿರಾಳಕೊಪ್ಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ನಾನು ಹೆಚ್ಚೇನು ಹೇಳಲ್ಲ. ಸಂಘದ ಹಿರಿಯರೇ ಈ ಬಗ್ಗೆ ಚರ್ಚಿಸಿದ್ದಾರೆ. ಇಂತಹ ಚರ್ಚೆಗೆ ಅವಕಾಶ ನೀಡದೆ ಜನರ ಮನಸ್ಸನ್ನ ಗೆಲ್ಲಲು ಸಂಘದ ಪ್ರಯತ್ನ ನಡೆದಿದೆ. ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ್ ಖರ್ಗೆ ಏನು ಹೇಳುತ್ತಾರೆ ಅನ್ನೋದು ಪರಿಣಾಮ ಬೀರಲ್ಲ ಎಂದಿದ್ದಾರೆ.