ಬಂಗಾರಪೇಟೆ: ಸುಮಾರು 520 ಸದಸ್ಯರ ಸದಸ್ಯತ್ವವ,ಅನರ್ಹಗೊಳಿಸಿದ್ದಾರೆ:ಎಸ್ ಜಿ ಕೋಟೆಯಲ್ಲಿ ಕಸಬಾ ವಿಎಸ್ ಎಸ್ಎನ್ ಅಧ್ಯಕ್ಷರಾದ ಕೃಷ್ಣೇಗೌಡ
ಸಹಕಾರ ಸಂಘದಲ್ಲಿ ಒಂದು ವರ್ಷದಿಂದ ವಹಿವಾಟು ನಡೆಸದ ಹಿನ್ನೆಲೆ ಸುಮಾರು 520 ಸದಸ್ಯರ ಸದಸ್ಯತ್ವವ ಅನರ್ಹಗೊಳಿಸಿದ್ದಾರೆ. ನಾನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿ ಮಾಡಿ ಮತ್ತೆ ಅವರ ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು ಎಂದು ಕಸಬಾ ವಿಎಸ್ ಎಸ್ಎನ್ ಅಧ್ಯಕ್ಷರಾದ ಕೃಷ್ಣೇಗೌಡ ತಿಳಿಸಿದರು.ತಾಲೂಕಿನ ಎಸ್‌ಜಿ ಕೋಟೆಯ ಕಸಬಾ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ 2024- 25 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ನನ್ನ ಗಮನಕ್ಕೆ ಬರದೇ ಸಹಕಾರ ಸಂಘದಲ್ಲಿ 520 ಸಂಘದ ಸದಸ್ಯರ ಸದಸ್ಯತ್ವ ವಜಾಗೊಂಡಿದೆ. ಇದನ್ನು ಎಆರ್ ಹಾಗೂ ಡಿ ಆರ್ ಹತ್ತಿರ ಮಾತನಾಡಿ ಸದಸ್ಯರನ್ನು ಮತ್ತೆ ಸಂಘಕ್ಕೆ ಸೇರಿಸಲು ಪ್ರಯತ್ನ ಮಾಡುತ್ತೇನೆ ಎಂದರು.