ಗಂಗಾವತಿ: ರಾಜ್ಯದಲ್ಲಿ ಆಡಳಿತ ಮಾಡುತ್ತಿರುವುದು ಟಿಪ್ಪು ಸುಲ್ತಾನ್ ಸರ್ಕಾರ; ಬಿಜೆಪಿ ಪಕ್ಷದ ಉಚ್ಚಾಟಿತ ನಾಯಕ ಶಾಸಕ ಬಸನಗೌಡ ಪಾಟೀಲ ನಗರದಲ್ಲಿ ಹೇಳಿಕೆ
ರಾಜ್ಯದಲ್ಲಿ ಆಡಳಿತ ಮಾಡುತ್ತಿರುವುದು ಟಿಪ್ಪು ಸುಲ್ತಾನ್ ಹಾಗೂ ಮುಸ್ಲಿಂ ರ ಸರ್ಕಾರ ಎಂದು ಬಿಜೆಪಿ ಪಕ್ಷದ ಉಚ್ಚಾಟಿತ ನಾಯಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ. ಸೆಪ್ಟೆಂಬರ್ 16 ರಂದು ಸಂಜೆ 6-00 ಗಂಟೆಗೆ ಗಂಗಾವತಿ ನಗರದಲ್ಲಿ ನಡೆದ ಗಣಪತಿ ವಿಸರ್ಜನೆ ಮೇರೆಗೆಯ ಪೂರ್ವದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ. ಮಾಜಿ ಸಂಸದ ಶಿವರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು