ಕೃಷ್ಣರಾಜನಗರ: ಕುವೆಂಪು ಬಡಾವಣೆಯಲ್ಲಿ ಅಕ್ರಮ ಭೂ ಮಾಫಿಯಾ ಸ್ಥಳೀಯರ ಆಕ್ರೋಶ: #localissue
ಕೆ ಆರ್ ನಗರ:- ಪಟ್ಟಣದ ಕುವೆಂಪು ಬಡಾವಣೆ ಎರಡನೇ ವಾರ್ಡಿನ ಸರ್ವೆ ನಂ.118 ರಲ್ಲಿ ಈ ಹಿಂದೆ ಪುಟ್ಟಸಿದ್ದ ಶೆಟ್ಟಿ ರವರು ಖಾಸಗಿ ಬಡಾವಣೆಯನ್ನು ಮಾಡಿದ್ದು ಇಲ್ಲಿ ಸರಿಸುಮಾರು 15000sq ಅನ್ನು ಪಾರ್ಕ್ ನಿರ್ಮಾಣಕ್ಕಾಗಿ ಜಾಗವನ್ನು ಕಾಯ್ದಿರಿಸಿದ್ದು ಇದನ್ನು ಜಮೀನನ್ನು ನಿವೇಶನವನನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಈ ಬಡಾವಣೆಯ ನೀಲ ನಕ್ಷೆಯಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಿರುವ ಜಾಗವನ್ನು ದಾಖಲಿಸಿದ್ದು ಇದನ್ನು ಪಟ್ಟಣದ ಪುರಸಭೆಯಿಂದಲೂ ಅನುಮೋದನೆಯನ್ನು ಪಡೆದಿರುತ್ತಾರೆ ಆದರೆ ಕೆಲ ದಿನಗಳ ಹಿಂದೆ ನಿವೇಶನಗಳಿಗೆ ಕಲ್ಲು ನೆಡುವ ಸಂದರ್ಭದಲ್ಲಿ ಅಕ್ರಮವಾಗಿ ಉದ್ಯಾನವನ ಎಂದು ಮೀಸಲಿಟ್ಟ ಜಾಗದಲ್ಲಿ ನಿವೇಶನಗಳಾಗಿ ಮಾರ್ಪಾಡು ಮಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ಕಂಡ ಬಡಾವಣೆಯ ನಿವಾಸಿಗಳು.