ಅಫಜಲ್ಪುರ: ಭೀಮಾ ತೀರದಲ್ಲಿ ಪ್ರವಾಹ: ಜನರ/ರೈತರ ಸಂಕಷ್ಟ ನಿವಾರಣೆಗಾಗಿ ಗಾಣಗಾಪುರದಲ್ಲಿ ದತ್ತ'ಯಾಗ
ಕಲಬುರಗಿ : ಭೀಮಾ ಪ್ರವಾಹಕ್ಕೆ ನಲುಗಿರುವ ರೈತರ ಸಂಕಷ್ಟ ನಿವಾರಣೆಯಾಗಲಿ ಅಂತ ಪ್ರಾರ್ಥಿಸಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಪುಣ್ಯಕ್ಷೇತ್ರ ದೇವಲ ಗಾಣಗಾಪುರದಲ್ಲಿ ಅ9 ರಂದು ಬೆಳಗ್ಗೆ 11 ಗಂಟೆಗೆ ದತ್ತ ಯಾಗ ಹಮ್ಮಿಕೊಳ್ಳಲಾಗಿತ್ತು. ಸಂಗಮದ ತಟದಲ್ಲಿರುವ ದತ್ತಾತ್ರೇಯ ದೇವರ ಸನ್ನಿಧಿಯಲ್ಲಿ ದತ್ತ ಯಾಗ ಮಾಡಲಾಗಿದ್ದು, ಶ್ರೀ ಗುರು ದತ್ತಾತ್ರೇಯ ದೇವಸ್ಥಾನದ ಇಡೀ ಅರ್ಚಕ ಬಳಗ ಯಾಗದಲ್ಲಿ ಪಾಲ್ಗೊಂಡಿತ್ತು. ಇದಕ್ಕೂ ಮುನ್ನ ಚಂಡಿ ಹೋಮ ನೆರವೇರಿಸಲಾಗಿದೆ. ಇನ್ಮುಂದೆ ಇಂತಹ ಮಹಾ ಪ್ರವಾಹ ಎದುರಾಗದಿರಲಿ ಅಂತ ಪ್ರಾರ್ಥಿಸಲಾಯಿತು. ಪ್ರವಾಹ ಇಳಿದ ನಂತರ ಇದೇ ಮೊದಲ ಬಾರಿಗೆ ದತ್ತ ಯಾಗ ನಡೆದಿದ್ದು ವಿಶೇಷವಾಗಿತ್ತು.