ಮೂಡಲಗಿ: ನೂತನ ಪ್ರವಾಸಿ ಮಂದಿರ ಸದ್ಬಳಕೆ ಮಾಡಿಕೊಳ್ಳಬೇಕು: ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ
ನೂತನ ಪ್ರವಾಸಿ ಮಂದಿರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮೂಡಲಗಿ ಪಟ್ಟಣದ ಗುರ್ಲಾಪೂರ ಕ್ರಾಸ್ ಬಳಿ ನೀರಾವರಿ ಇಲಾಖೆಯಿಂದ ಸುಮಾರು 5.40 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು ಪ್ರವಾಸಿ ಮಂದಿರ ನಿರ್ಮಾಣದಿಂದ ಗಣ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ ಮತ್ತು ಸಾರ್ವಜನಿಕರ ಕೋರಿಕೆಯ ಪ್ರವಾಸ ಮಂದಿರ ಉದ್ಘಾಟನೆ ಮಾಡಲಾಗಿದೆ ಎಂದರು