ಬೆಂಗಳೂರು ಉತ್ತರ: ಜಾತಿ ಸಮೀಕ್ಷೆ ನಿಲ್ಲುವಂತಿಲ್ಲ, ೭ ರ ಒಳಗೆ ಮುಗಿಯಲೇಬೇಕು; ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಶಿಕ್ಷಣ ಸಮೀಕ್ಷೆ (ಜಾತಿ ಗಣತಿ) ಕುರಿತು ಮಾತನಾಡಿ, “ಸಮೀಕ್ಷಾ ಕಾರ್ಯವು ಸೆಪ್ಟೆಂಬರ್ ೨೨ ರಂದು ಆರಂಭಗೊಂಡಿದ್ದು, ಅಕ್ಟೋಬರ್ ೭ ರೊಳಗೆ ಪೂರ್ಣಗೊಳ್ಳಲಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿದ್ದರೂ ಬಹುತೇಕವು ಪರಿಹಾರಗೊಂಡಿವೆ. ಆದ್ದರಿಂದ ಇಂದಿನಿಂದ ಸಮೀಕ್ಷಾ ಕಾರ್ಯ ತೀವ್ರಗತಿಯಲ್ಲಿ ನಡೆಯಲಿದೆ” ಎಂದು ತಿಳಿಸಿದರು.ಅವರು ಮುಂದುವರಿದು, “ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ” ಎಂದು ಶುಕ್ರವಾರ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಮಾಧ್ಯಮಗಳ ಮುಂದೆ ಹೇಳಿದರು.