ಹುಮ್ನಾಬಾದ್: ನಗರದಲ್ಲಿ ಬಿಜೆಪಿ ಮುಖಂಡರಿಂದ ಸಿ.ಎಂ ಸಿದ್ದರಾಮಯ್ಯ ಭಾವಚಿತ್ರ ಪ್ರದರ್ಶಿಸಿ ಅಕ್ರೋಶ ಪೊಲೀಸರಿಂದ ಅಡ್ಡಿ, ಭಾರೀ ಮಧ್ಯೆ ಮಾತಿನ ಚಕಮಕಿ
Homnabad, Bidar | Nov 12, 2025 ಕಬ್ಬಿನ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಎತ್ತಿನ ಬಂಡಿಗಳ ಸಮೇತ ನಗರದಲ್ಲಿ ಬುಧವಾರ ಮಧ್ಯಾಹ್ನ 12:30 ಕ್ಕೆ ನಡೆಸಿದ ಬೃಹತ್ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಪಡಿಸಿದ ಪ್ರಸಂಗ ನಡೆಯಿತು. ರಾಲಿ ಕೇಂದ್ರ ಬಸ್ ನಿಲ್ದಾಣ ಎದುರು ಆಗಮಿಸುತ್ತಿದ್ದಂತೆ ಪ್ರತಿಭಟನೆಯನ್ನು ಬಿಜೆಪಿ ಮುಖಂಡರು ಸಿಎಂ ಭಾವಚಿತ್ರವನ್ನು ಪ್ರದರ್ಶಿಸಿ ಅದಕ್ಕೆ ಸಗಣಿ ಬೆಳಿದು ಆಕ್ರೋಶ ವ್ಯಕ್ತಪಡಿಸಿದಾಗ ಡಿವೈಎಸ್ಪಿ ಮಂಡಲಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಅಡ್ಡಿಪಡಿಸಿದ ಪ್ರಸಂಗ ನಡೆಯಿತು. ಇವಳಿ ಬಿಜೆಪಿ ಮುಖಂಡರು ಪೊಲೀಸರ ಮಧ್ಯ ಮಾತಿನ ಚಕಮಕಿ ನಡೆಯಿತು.