ರಾಯಚೂರು: ವಿಜಯಪುರ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣದ ಕುರಿತು ನಗರದಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ
ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದಿರುವ ಬ್ಯಾಂಕ್ ದರೋಡೆ ಪ್ರಕರಣದ ಕುರಿತು ರಾಯಚೂರ ನಗರದಲ್ಲಿ ಬುಧವಾರ ಮಧ್ಯಾಹ್ನ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಶರಣ ಪ್ರಕಾಶ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾಂಕು ಕಳ್ಳತನ ಪ್ರಕರಣಗಳು ಎಲ್ಲಾ ಸರ್ಕಾರಗಳ ಸಮಯದಲ್ಲೂ ನಡೆದಿವೆ ಆದರೆ ನಮ್ಮ ಸರ್ಕಾರ ಆ ರೀತಿ ನಡೆಯುವಂತಹ ಘಟನೆಗಳ ಆರೋಪಿಗಳನ್ನು ತಕ್ಷಣಕ್ಕೆ ಬಂಧಿಸುವಂತಹ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವ ಎನ್ ಎಸ್ ಬೋಸರಾಜು ವಿ.ಪ ಸದಸ್ಯ ಎ.ವಸಂತಕುಮಾರ್ ಉಪಸ್ಥಿತರಿದ್ದರು.