ನಾಳೆ ರಾಯಚೂರಿನಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಯಲಿದ್ದು ರಾಯಚೂರು ನಗರ ಮಧುವಣಗಿತ್ತಿಯಂತೆ ಸಿದ್ಧವಾಗಿದೆ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ತತ್ವದ ಅಡಿಯಲ್ಲಿ ಪಥಸಂಚಲನೆ ಮಾಡಲಾಗುತ್ತಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಯಲಿದೆ. ನಾಳೆ 4 ಗಂಟೆಗೆ ಆರಂಭವಾಗಲಿರೋ ಪಥ ಸಂಚಲನದ ನಂತರ ಸಾರ್ವಜನಿಕ ಸಮಾರಂಭವನ್ನು ನಗರದ ವಾಲ್ಕಟ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ.